೧೯೯೦ರಲ್ಲಿ ಬಿಡುಗಡೆಯಾದ ಈ ಚಿತ್ರವು ಯುದ್ಧದ ಪಿಡುಗಿನ ಬಗ್ಗೆ ಜಾಗೃತಿ ಮೂಡಿಸುವ ಕಥಾ ಹಂದರವುಳ್ಳದ್ದಾಗಿದೆ. ಭಾರತದ ಸೈನಿಕ ಅಚ್ಚಪ್ಪನ ಪಾತ್ರದಲ್ಲಿ ವಿಷ್ಣುವರ್ಧನ್ ಮತ್ತು ನಾಯಕಿಯ ಪಾತ್ರದಲ್ಲಿ ಸುಹಾಸಿನಿ ಅಭಿನಯಿಸಿದ್ದಾರೆ. ಯುದ್ಧಭೂಮಿಯಲ್ಲಿ ನಡೆಯುವ ಚಕಮಕಿಗಳನ್ನು, ಸೈನಿಕರ ಮನದಲ್ಲುಂಟಾಗುವ ಗೊಂದಲಗಳನ್ನು ಚಿತ್ರದಲ್ಲಿ ಕೆಲವೆಡೆ ತೋರಿಸಲಾಗಿದೆ. == ಪಾತ್ರವರ್ಗ == ವಿಷ್ಣುವರ್ಧನ್ ಅಚ್ಚಪ್ಪ ಆಗಿ ಸುಹಾಸಿನಿ ಅನ್ನಪೂರ್ಣ ಆಗಿ ಕೆ.ಎಸ್. ಅಶ್ವಥ್ ಬೆಳ್ಳಿಯಪ್ಪ ರಾಮ್ ಕುಮಾರ್ ನಾಯಕ್ ಮೋಹನ್ ಆಗಿ ಮಾಸ್ಟರ್ ಆನಂದ್ ವೀರರಾಜು ಆಗಿ ಪ್ರಕಾಶ್ ರಾಜ್ ಒಬ್ಬ ಸಿಪಾಯಿ ಆಗಿ ಸಿಹಿ ಕಹಿ ಚಂದ್ರು ಕ್ಷೌರಿಕ ಮೆಣಸಿನಕಾಯಿ ಪಾತ್ರದಲ್ಲಿ ಸದಾಶಿವ ಬ್ರಹ್ಮಾವರ್ ಅನ್ನಪೂರ್ಣಳ ತಂದೆ ರಂಗಪ್ಪನ ಪಾತ್ರದಲ್ಲಿ ಕಾವ್ಯ ಮುಖ್ಯಮಂತ್ರಿ ಚಂದ್ರು == ಹಿನ್ನೆಲೆ ಸಂಗೀತ == ಹಂಸಲೇಖಾ ಅವರು ಈಚಲನಚಿತ್ರಕ್ಕೆ ಗೀತೆಗಳನ್ನು ಬರೆದು ಅವುಗಳಿಗೆ ಸಂಗೀತವನ್ನೂ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಚಲನಚಿತ್ರದಲ್ಲಿ 5 ಹಾಡುಗಳಿವೆ. == ಸ್ವಾರಸ್ಯ == ಈ ಚಿತ್ರದ ಕೆಲವು ದೃಶ್ಯಗಳಿಗಾಗಿ ವಿಷ್ಣುವರ್ಧನ್ ತಮ್ಮ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಕೊಂಡಿದ್ದರು.